ಜಯಕರವಾದ ಕ್ರೈಸ್ತ ಜೀವನ (KA)

“ನಮ್ಮ ಜೀವವು ಬೇಟೆಗಾರನ ಬಲೆಯಿಂದ ತಪ್ಪಿಸಿಕೊಂಡ ಪಕ್ಷಿಯಂತಿದೆ ; ಬಲೆಯು ಹರಿದುಹೋಯಿತು, ನಾವು ತಪ್ಪಿಸಿಕೊಂಡೆವು.” 

ಕೀರ್ತನೆ 124:7 

ಜಯಕರವಾದ ಕ್ರೈಸ್ತ ಜೀವನವನ್ನು ನಡೆಸಿ

ಜಯಕರವಾದ ಕ್ರೈಸ್ತಜೀವನ ಎಂದರೇನು? 

     *  ನಾವು ದೇವರಿಂದ ಸ್ವೀಕರಿಸಲ್ಪಟ್ಟಿದ್ದೇವೆ ಮತ್ತು ಪ್ರೀತಿಸಲ್ಪಡುತ್ತೇವೆ ಎಂಬ ಭರವಸೆ 

     *  ಪವಿತ್ರಾತ್ಮನ ಸಾನಿಧ್ಯವನ್ನು ಅನುಭವಿಸುವುದು 

     *   ದೇವರು ನಮ್ಮೊಂದಿಗೆ ಮಾತನಾಡುವುದನ್ನು ಕೇಳುವುದು 

     *   ನಮ್ಮ ಗುರಿಯನ್ನು ಪೂರೈಸಲು ಸ್ವತಂತ್ರವಾಗಿರುವುದು 

     *   ನಮ್ಮ ಪ್ರಾರ್ಥನೆಗಳಿಗೆ ಉತ್ತರ ದೊರೆಯುವುದು 

       … ಮತ್ತು ಇನ್ನು ಹೆಚ್ಚಿನವು!!

ಈ ವೆಬ್ ಸೈಟ್ ನಲ್ಲಿ ನಮ್ಮ ಜೀವನದಲ್ಲಿ ಬರುವ ಯಾವುದೇ ಕಷ್ಟಗಳಿಂದ ನಮ್ಮನ್ನು ಮುಕ್ತಗೊಳಿಸಲು ಮತ್ತು ನಮ್ಮನ್ನು ಯೇಸುವಿನ ಹತ್ತಿರಕ್ಕೆ ಸೆಳೆಯಲು ಸಹಾಯ ಮಾಡುವ ಭೋದನೆ ಮತ್ತು ಪ್ರಾರ್ಥನೆಗಳಿವೆ.

 ಕಾರ್ಯಪುಸ್ತಕ 

‘ಜಯಕರವಾದ  ಕ್ರೈಸ್ತಿಯ ಜೀವಿತದ’  ಕಾರ್ಯಪುಸ್ತಕವು ಈ ವೆಬ್ ಸೈಟ್ ನಿಂದ  ಇಂಗ್ಲೀಷ್,  ಬೆಂಗಾಳಿ,  ಕನ್ನಡ,  ಮಲಯಾಳಂ,  ತೆಲಗು ಮತ್ತು ತಮಿಳು,  ಹಿಂದಿ ಭಾಷೆಗಳಲ್ಲಿ  ಉಚಿತವಾಗಿ  ಡೌನ್  ಲೋಡ್   ಮಾಡಲು  ಲಭ್ಯವಿದೆ.

ಈ ಕಾರ್ಯಪುಸ್ತಕದಲ್ಲಿ ಪಶ್ಚಾತ್ತಾಪ ಮತ್ತು ಕ್ಷಮೆಯ ಮಾದರಿ ಪ್ರಾರ್ಥನೆಗಳು ವಿವರಣೆಗಳು ಮತ್ತು ಕೆಲವು ಸತ್ಯವೇದದ ಉಲ್ಲೇಖಗಳು ಮತ್ತು ಸಾಕ್ಷಿಗಳೊಂದಿಗೆ ಇವೆ.  ಈ ಪ್ರಾಥನೆಗಳನ್ನು ನೀವು ಮೊದಲು ನಿಮ್ಮ ಮೇಲೆ ಬಳಸಬೇಕೆಂದು,  ನಂತರ ಇತರರಿಗೆ ಸಹಾಯ ಮಾಡಲು ಬಳಸಬೇಕೆಂದು ಉದ್ದೇಶಿಸಲಾಗಿದೆ.

ಸತ್ಯವೇದದ ಅಧ್ಯಯನಗಳು 

ಈ  ವೆಬ್  ಸೈಟ್  ನಿಂದ  ಡೌನ್  ಲೋಡ್  ಮಾಡಲು  3  ವಿಭಿನ್ನ  ಸತ್ಯವೇದದ  ಅಧ್ಯಯನಗಳುಲಭ್ಯವಿದೆ,  ಅವುಗಳನ್ನು ವೈಯಕ್ತಿಕ  ಅಧ್ಯಯನಕ್ಕಾಗಿ  ಅಥವಾ  ಸಣ್ಣ  ಗುಂಪಿನಲ್ಲಿ  ಬಳಸಬಹುದು:-

‘ನಮ್ಮನು  ಸರಿಪಡಿಸಿಕೊಳ್ಳುವಿಕೆಯ  ಕುರಿತಾದ’  ಸತ್ಯವೇದದ  ಅಧ್ಯಯನ 

‘ಹಣದ  ಕುರಿತಾದ’  ಸತ್ಯವೇದದ  ಅಧ್ಯಯನ 

ಮತ್ತು  ‘ಮೂಲಭೂತ’  ಸತ್ಯವೇದದ  ಅಧ್ಯಯನ 

ಜಯಕರವಾದ ಕ್ರೈಸ್ತ ಜೀವನ ಕಾರ್ಯಪುಸ್ತಕ

ನಮ್ಮ ಪಾಪಗಳಿಂದ ನಮ್ಮನ್ನು ಮುಕ್ತಗೊಳಿಸಲು ಯೇಸು ತನ್ನ  ಜೀವವನ್ನು ಕೊಟ್ಟನು, ನಮ್ಮಲ್ಲಿ ಅನೇಕರು ಕ್ರಿಸ್ತನು ನಮಗಾಗಿ ಖರೀದಿಸಿದ ಸ್ವಾತಂತ್ರ್ಯವನ್ನು ಹಿಡಿಯಲು ವಿಫಲರಾಗುತ್ತೇವೆ. ಈ ಕಾರ್ಯಪುಸ್ತಕವು ನಮ್ಮ ಜೀವನದಲ್ಲಿ ನಾವು ಇನ್ನು ಸ್ವಾತಂತ್ರರಾಗಿಲ್ಲದ ಕ್ಷೇತ್ರಗಳನ್ನು ಗುರುತಿಸಲು ಸಹಾಯಮಾಡುತ್ತದೆ. ವಿವರಣೆಗಳು ಮತ್ತು ಮಾದರಿ ಪ್ರಾರ್ಥನೆಗಳ ಮೂಲಕ, ನಾವು ಇಂದೆಂದೂ ಪರಿಗಣಿಸದ ಅನೇಕ ಪಶ್ಚಾತ್ತಾಪ ಮತ್ತು ಕ್ಷಮೆಯ ಕೀಲಿಗಳನ್ನು  ಇದು ನಮಗೆ ಕಲಿಸುತ್ತದೆ. ಪ್ರಾರ್ಥನಪೂರ್ವಕವಾಗಿ ಅದರ ಕೆಲಸ ಮಾಡುವುದರ ಮೂಲಕ, ನಾವು ಈ ಕೀಲಿಗಳನ್ನು ನಮ್ಮ ಸ್ವಂತ ಜೀವನಕ್ಕೆ ಅನ್ವಹಿಸಬಹುದು. ಯೇಸು ನಮಗಾಗಿ ಬಯಸುವ ಜೇವನವನ್ನು ನಡೆಸಲು ಮುಕ್ತರಾಗಬಹುದು ಮತ್ತು ಸಬಲರಾಗಬಹುದು. ಆಗ ನಾವು ಇತರ ಜನರನ್ನು ಸಹ ಮುಕ್ತಗೊಳಿಸಲು ಸಹಾಯ ಮಾಡಲು ಸಜ್ಜಾಗುತ್ತೇವೆ.

ಸಾಕ್ಷಿ

ನಮ್ಮ ಸೇವೆಯಲ್ಲಿ ಪ್ರಾರಂಭದಿಂದ ಸುಮಾರು 4 ವರ್ಷದ ವರೆಗೂ ಫಲಗಳಿಲ್ಲದ ಸೇವೆಯಾಗಿತ್ತು, ಅದಕ್ಕಾಗಿ ನಾವು ಅನೇಕ ಹಣ ಖರ್ಚು ಮಾಡಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವು ಇದರಿಂದ  ಸ್ವಲ್ಪ ದಿವಸ ಮಾತ್ರ ಎಲ್ಲವು ಚೆನ್ನಾಗಿರುತ್ತಿತ್ತು, ಮತ್ತೆ ಯಥಾಪ್ರಕಾರವೇ ಸಭೆಯ ಸೇವೆ ಮತ್ತು ವಿಶ್ವಾಸಿಗಳು ತಣ್ಣಗಾಗಿ ಹೋಗುತಿದ್ದರಿಂದ ನಮಗೆ ಸೇವೆಯಲ್ಲಿ ತೃಪ್ತಿ ಇರುತ್ತಿದ್ದಿಲ್ಲ, ಹಾಗೂ ಬಳಲಿ ಹೋಗುತ್ತಿದ್ದೇವು, ಈ ಸಂದರ್ಭದಲ್ಲಿ ನಮಗೆ ವಿಕ್ಟೋರಿಯಸ್ ಕ್ರಿಶ್ಚಿಯನ್ ಲೈಫ್   ಪ್ರಾರ್ಥನ ಸೇವೆಯು ಪರಿಚಯವಾಯಿತು, ಜಯಕರವಾದ ಕ್ರೈಸ್ತ ಜೀವನ ಕುರಿತಾದ ಬೋಧನೆ ಮತ್ತು ಇದರ ಪ್ರಾರ್ಥನೆ ಸೇವೆಯನ್ನು ನಾವು ಪ್ರತ್ಯಕ್ಷವಾಗಿ ಕಂಡು ನಮಗೆ ಬಹಳ ಆಶ್ಚರ್ಯವಾಯಿತು , ಈ ಬೋಧನೆ ಮತ್ತು ಪ್ರಾರ್ಥನ ಸೇವೆಯನ್ನು ನಮ್ಮ ಸೇವಾ ಸ್ಥಳದಲ್ಲಿ ನಾವು ಪರಿಚಯಿಸಿದೆವು, ಮತ್ತು ಇದರ ಮೂಲಕ ಜನರು ಕ್ರಿಸ್ತನೊಂದಿಗೆ ಒಂದಾಗುತ್ತಿದ್ದದನ್ನು  ಕಂಡು ನಮಗೆ ಬಹಳ ಸಂತೋಷವಾಯಿತು, ಇದು ಕಠಿಣ ಕೆಲಸವಾಗಿತ್ತು ಮತ್ತು ಪ್ರತಿಯೊಂದು ವ್ಯಕ್ತಿಯೊಂದಿಗೆ ಕೆಲವು ಗಂಟೆಗಳು ತೆಗೆದುಕೊಂಡಿತು,  ಆದರೂ ನಾವು ಸೇವೆಯಲ್ಲಿ ಫಲಕಂಡೆವು ಮತ್ತು ಸೇವೆಯಲ್ಲಿ ಪ್ರಯಾಸ ಪಡಬೇಕಾದರೂ ಬಳಲುವಿಕೆ ನಮ್ಮನು ಬಿಟ್ಟು ದೂರ ಹೋಯಿತು, ಯಾಕೆಂದರೆ ಜನರು ತಮ್ಮ ಜೀವಿತದಲ್ಲಿ ದೇವರಿಂದ  ಶಾಂತಿ ಮತ್ತು ಗುಣಪಡಿಸುವಿಕೆಯನ್ನು ಹೊಂದಲು ನಾವು ಅವರಿಗೆ ಸಹಾಯ ಮಾಡುತ್ತಿದ್ದೇವೆ ಎಂದು ಸಂತೋಷಪಡುತ್ತಿದ್ದೇವೆ, ಮತ್ತು  ಇದಕ್ಕೆಲ್ಲಾ ಕಾರಣನಾಗಿರುವ ದೇವರಿಗೆ ಸ್ತೋತ್ರ.” 
2025
“ನಾನು 3 ರಿಂದ 4 ವರ್ಷ ಎದೆನೋವಿನಿಂದ ಬಳಲುತಿದ್ದೆ, ಅನೇಕ ಆಸ್ಪತ್ರೆಗಳಿಗೆ ತೋರಿಸಿದರು ಗುಣವಾಗಲಿಲ್ಲ, ಲಕ್ಷಾನುಗಟ್ಟಲೆ ಹಣವನ್ನು ಖರ್ಚು ಮಾಡಿದರು ಯಾವುದೇ ಪ್ರಯೋಜನವಾಗಲಿಲ್ಲ, ನಾನು ತುಂಬಾ ಚಿಂತೆಗೆ ಒಳಗಾದೆ, ನಾನು ಬದುಕುತ್ತೇನೆ ಅನ್ನೋ ಭರವಸೆಯನ್ನು ಕಳೆದುಕೊಂಡೆ, ಆ ಸಮಯದಲ್ಲಿ ನನಗೆ ಒಬ್ಬರು ಸೇವಕರು ಪರಿಚಯವಾಗಿ ನನಗೆ ವಿ ಸಿ ಎಲ್ ಪ್ರಾರ್ಥನಾ ಸೇವೆಯನ್ನು ಪರಿಚಯಿಸಿದರು, ಮತ್ತು ನನ್ನ ಈ ಎದೆನೊವಿಗೆ ಕಾರಣವಾಗಿದ್ದಂತ  ಕ್ಷಮಿಸದ ಪಾಪವನ್ನು ನಾನು  ಗುರುತಿಸುವಂತೆ ನನ್ನನ್ನು ಪ್ರಾರ್ಥನೆಯಲ್ಲಿ ನಡೆಸಿದರು ಮತ್ತು ಆ ವ್ಯಕ್ತಿಯನ್ನು ಪ್ರಾರ್ಥನೆ ಮೂಲಕ ಕ್ಷಮಿಸಲು ಹೇಳಿದರು ನಾನು ಅವರು ಹೇಳಿದಂತೆ ಮನಪೂರ್ವಕವಾಗಿ ಕ್ಷಮಿಸಿದೆ ನಂತರ ಎದೆ ನೋವಿಗಾಗಿ ಪ್ರಾರ್ಥಿಸಿದರು ನಾನು ಸಂಪೂರ್ಣವಾಗಿ ಎದೆ ನೋವಿನಿಂದ ಬಿಡುಗಡೆಯಾದೇನು ದೇವರಿಗೆ ಸ್ತೋತ್ರ.”
2025

“ನನ್ನ ಜೀವನದಲ್ಲಿ ಇತರ ಜನರಿಂದ ಮರೆಯಾಗಿದ್ದ ಅನೇಕ  ವಿಷಯಗಳು ನಡೆದಿವೆ. ‘ಜಯಕರವಾದ ಕ್ರೈಸ್ತ ಜೀವನದ ಆನ್ ಲೈನ್  ಬೋಧನೆಯ ಮೂಲಕ, ನಾನು ಈ ವಿಷಯಗಳಲ್ಲಿ ಕೆಲವು ಪಾಪಗಳಾಗಿವೆ ಎಂದು ಕಂಡುಹಿಡಿದಿದ್ದೇನೆ, ಇದನ್ನು ನಾನು ಮೊದಲು ಅರಿತುಕೊಂಡಿರಲಿಲ್ಲ. ನನ್ನ ಜೀವನದಲ್ಲಿನ ನಿರ್ದಿಷ್ಟ ಸಮಸ್ಯೆಗಳ ಬಗ್ಗೆ ನಾನು ಪಶ್ಚತಾಪಪಟ್ಟು ಕ್ಷಮಿಸಿದ ಕಾರಣ, ನನ್ನ ಬೆನ್ನು ಮತ್ತು ಕಾಲಿನ ತೀವ್ರವಾದ ನೋವು ಗುಣವಾಗಿದೆ. ನೋವು ಎಷ್ಟು ತೀವ್ರವಾಗಿತ್ತು ಎಂದರೆ ನಾನು ಸರಿಯಾಗಿ ನಡೆಯಲು ಸಾಧ್ಯವಾಗುತ್ತಿರಲಿಲ್ಲ! ಆ ನೋವು ಈಗ ಇಲ್ಲ ಮತ್ತು ನಾನು ಗುಣಮುಖನಾಗಿದ್ದೇನೆ ಎಂದು ನಾನು ನಂಬುತ್ತೇನೆ. ನಾನು ಸ್ವಯಂ-ಅಭಿವೃದ್ದಿಗಾಗಿ ಸಾಕಷ್ಟು ಹಣ ಮತ್ತು ಶ್ರಮವನ್ನು ವ್ಯಯಿಸಿದ್ದೇನೆ, ಆದರೆ ಈಗ ನಾನು ನಮ್ಮ ಜೀವನದಲ್ಲಿ ಬದಲಾವಣೆ ಮತ್ತು ವೈಯಕ್ತಿಕ ಅಭಿವೃದ್ಧಿಯನ್ನು ತರಲು ದೇವರ ವಾಕ್ಯ ಮತ್ತು ಆತನ ಶಕ್ತಿಯಿಂದ ಮಾತ್ರ ಸಾಧ್ಯ ಎಂದು ಅರಿತುಕೊಂಡಿದ್ದೇನೆ.  ನಿಜವಾದ ರೂಪಾಂತರ.”
2022

ಜಯಕರವಾದ ಕ್ರೈಸ್ತ ಜೀವನ

ಪ್ರತಿಯೊಬ್ಬ ವಿಶ್ವಾಸಿಯನ್ನು ದೇವರು ಸೃಷ್ಟಿಸಿದ ಕೆಲಸವನ್ನು ಮಾಡಲು ಸಜ್ಜುಗೊಳಿಸುವುದು ಮತ್ತು ಸಶಕ್ತಗೊಳಿಸುವುದು

2025